ಕ್ಲಾಸಿಫೈಡ್ಸ್
1. ಕ್ಲಾಸಿಫೈಡ್ ಅನ್ನು ಹೇಗೆ ಪೋಸ್ಟ್ ಮಾಡಲಿ?
2. ನಾನು ನನ್ನ ಕ್ಲಾಸಿಫೈಡ್‌ಅನ್ನು ಎಲ್ಲಿ ಪೋಸ್ಟ್ ಮಾಡಲಿ?
3. ನಾನು ನನ್ನ ಕ್ಲಾಸಿಫೈಡ್ ಅನ್ನು ಹೇಗೆ ಸಂಪಾದನೆ ಮಾಡಲಿ ಅಥವಾ ಅಳಿಸಲಿ?
4. ನನ್ನ ಕ್ಲಾಸಿಫೈಡ್ ಎಲ್ಲಿಯ ವರೆಗೆ ಸಕ್ರಿಯವಾಗಿರಬಹುದು?
5. ನನ್ನ ಕ್ಲಾಸಿಫೈಡ್ ಅನ್ನು ಪ್ರಕಟಿಸಲು ನನಗೆ ದೃಢೀಕರಣ ಇಮೇಲ್ ದೊರೆಯದಿದ್ದರೆ ನಾನೇನು ಮಾಡಬೇಕು?
6. ಆಸಕ್ತಿಯಿರುವ ಕ್ಲಾಸಿಫೈಡ್ ಅನ್ನು ಹೇಗೆ ಉಳಿಸಲಿ?
7. ನಾನು ನನ್ನ ಕ್ಲಾಸಿಫೈಡ್ ಜಾಹೀರಾತನ್ನು ನಾನು ಹೇಗೆ ವೀಕ್ಷಿಸಲಿ?
8. ನನ್ನ ಕ್ಲಾಸಿಫೈಡ್ ಜಾಹೀರಾತನ್ನು ಯಾಕೆ ಅಳಿಸಲಾಗಿದೆ?
9. ನಾನು ಕ್ಲಾಸಿಫೈಡ್ ಜಾಹೀರಾತಿಗೆ ಹೇಗೆ ಪ್ರತ್ಯುತ್ತರ ಕಳುಹಿಸಲಿ?
10. ವೆಬ್‌ದುನಿಯಾ ಕ್ಲಾಸಿಫೈಡ್ಸ್‌ನಲ್ಲಿ ನಾನು ಕ್ಲಾಸಿಫೈಡ್ಸ್ ಅನ್ನು ಹೇಗೆ ಶೋಧಿಸಲಿ?
11. ಹೊಸ ಪೋಸ್ಟಿಂಗ್ ಮಾಡಿದಾಗ ನಾನು ಹೇಗೆ ಇಮೇಲ್ ಎಚ್ಚರಿಕೆಯೊಂದನ್ನು ಸ್ವೀಕರಿಸಲಿ?
12. ನನ್ನ ಕ್ಲಾಸಿಫೈಡ್ ಜಾಹೀರಾತಿನೊಂದಿಗೆ ಫೋಟೋವನ್ನು ಹೇಗೆ ಪೋಸ್ಟ್/ನವೀಕರಿಸು/ಸೇರಿಸ ಬಹುದು?
13. ನನ್ನ ಜಾಹೀರಾತುಗಳು ಒಂದೇ ಬಾರಿಗೆ ಪೋಸ್ಟ್ ಮಾಡಲಾಗುವುದೇ?
14. ನನ್ನ ಶೋಧ ಮಾನದಂಡವನ್ನು ಹೊಂದುವಂತಹ ಜಾಹೀರಾತುಗಳ ಬಗ್ಗೆ ನನಗೆ ಸೂಚನೆ ಸಿಗುವುದೇ?
15. ನಾನು ನನ್ನ ಪಾಸ್‌ವರ್ಡ್‌ನ್ನು ಮರೆತಿದ್ದೇನೆ ನಾನೇನು ಮಾಡಲಿ?
16. ಯಾಕೆ ನನ್ನ ಜಾಹೀರಾತಿಗೆ ಯಾವುದೇ ಪ್ರತಿಕ್ರಿಯೆ ಲಭಿಸುತ್ತಿಲ್ಲ?
17. ನನ್ನ ನಗರದ ಹೆಸರು ವೆಬ್‌ದುನಿಯಾ ಕ್ಲಾಸಿಫೈಡ್‌ನಲ್ಲಿ ಕಾಣಿಸಿಕೊಳ್ಳದಿದ್ದರೆ ಏನು ಮಾಡಬೇಕು?
ಸಾಮಾನ್ಯ
1. ವೆಬ್‌ದುನಿಯಾ ಕ್ಲಾಸಿಫೈಡ್‌ನಲ್ಲಿ ಎಲ್ಲಿ ನಾನು ನೋಂದಣಿ ಮಾಡಿಕೊಳ್ಳಬೇಕು?
2. ನಾನು ನನ್ನ ಇಂಟರ್‌ಫೇಸ್ ಭಾಷೆಯನ್ನು ಹೇಗೆ ಬದಲಿಸಲಿ?
3. ವೆಬ್‌ದುನಿಯಾ ಕ್ಲಾಸಿಫೈಡ್‌ನ ನಿಬಂಧನೆ ಮತ್ತು ಷರತ್ತುಗಳಾವುವು?
4. ದುರ್ಬಳಕೆ, ಸ್ಪಾಮ್ ಅಥವಾ ಅಶ್ಲೀಲ ವಿಷಯಗಳನ್ನು ಹೇಗೆ ವರದಿ ಮಾಡಲಿ?
5. ಪೋಸ್ಟ್ ಮಾಡುವುದರ ಮೂಲಕ ಯಾರಾದರೂ ನನಗೆ ಕಿರುಕುಳ ನೀಡಿದರೆ ನಾನೇನು ಮಾಡಲಿ?
ಕ್ಲಾಸಿಫೈಡ್ಸ್
1. ಕ್ಲಾಸಿಫೈಡ್ ಅನ್ನು ಹೇಗೆ ಪೋಸ್ಟ್ ಮಾಡಲಿ? 
ವೆಬ್‌ದುನಿಯಾ ಕ್ಲಾಸಿಫೈಡ್ಸ್ ಮುಖಪುಟದಲ್ಲಿ ಪೋಸ್ಟ್ ಜಾಹೀರಾತು ಟ್ಯಾಬ್‌ಅನ್ನು ಕ್ಲಿಕ್ ಮಾಡಿ, ನೀವು ಪೋಸ್ಟ್ ಮಾಡಲು ಬಯಸುವ ಕ್ಲಾಸಿಫೈಡ್‌ಗೆ ದೇಶ, ರಾಜ್ಯ, ನಗರ, ವಿಭಾಗ ಮತ್ತು ಉಪವಿಭಾಗವನ್ನು ಆಯ್ಕೆ ಮಾಡಿ, ನಿಮ್ಮ ಜಾಹೀರಾತು ಶೀರ್ಷಿಕೆ ಮತ್ತು ವಿವರಣೆಯನ್ನು ( ಕೆಂಪು ನಕ್ಷತ್ರ ಸೂಚಿತ ಕ್ಷೇತ್ರಗಳು ಕಡ್ಡಾಯವಾಗಿ) ನಮೂದಿಸಿ. ನಿಮ್ಮ ವಿಭಾಗಕ್ಕೆ ಅನುಸಾರವಾಗಿ ನೀವು ಹೆಚ್ಚಿನ ವಿವರಗಳನ್ನು ನೀಡಬಹುದು, ಮತ್ತು ವಿಂಡೋದಲ್ಲಿರುವ "ಜಾಹೀರಾತು ಪೋಸ್ಟ್ ಮಾಡಿ" ಬಟನ್ ಅನ್ನು ಕ್ಲಿಕ್ ಮಾಡಿ ನಿಮ್ಮ ಜಾಹೀರಾತನ್ನು ವೀಕ್ಷಿಸಲು "ಜಾಹೀರಾತು ಪೂರ್ವವೀಕ್ಷಣೆ"ಯನ್ನು ಕ್ಲಿಕ್ ಮಾಡಿ.
ನೀವು ನಿಮ್ಮ ಜಾಹೀರಾತನ್ನು ಪೋಸ್ಟ್ ಮಾಡುವುದಕ್ಕಿಂತ ಮೊದಲು ನಿಮಗೆ ವೆಬ್‌ದುನಿಯಾ ಕ್ಲಾಸಿಫೈಡ್ ಲಾಗಿನ್ ID ಇರಲೇ ಬೇಕು.
ಜಾಹೀರಾತು ಪೋಸ್ಟ್ ಮಾಡಿದ ಬಳಿಕ ನಿಮ್ಮ ನೋಂದಣಿಯ ವೇಳೆ ಒದಗಿಸಲಾದಂತಹ ಇಮೇಲ್ ಖಾತೆಗೆ ದೃಢೀಕರಣ ಇಮೇಲೊಂದು ಬರುವುದು.
ಇಷ್ಟು ಮಾತ್ರ. ನಿಮ್ಮ ಕ್ಲಾಸಿಫೈಡ್ ವೆಬ್‌ದುನಿಯಾ ಕ್ಲಾಸಿಫೈಡ್ ಪೋರ್ಟಲ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಗೋಚರಿಸಿಕೊಳ್ಳುವುದು ಮತ್ತು 365 ದಿನಗಳ ಕಾಲ ಅದರಲ್ಲಿ ಉಳಿಯುವುದು
2. ನಾನು ನನ್ನ ಕ್ಲಾಸಿಫೈಡ್‌ಅನ್ನು ಎಲ್ಲಿ ಪೋಸ್ಟ್ ಮಾಡಲಿ?

yಜಾಹೀರಾತನ್ನು ಸೂಕ್ತ ವಿಭಾಗದಲ್ಲಿಯೇ ಪೋಸ್ಟ್ ಮಾಡಬೇಕು. ನಿಮ್ಮ ಕ್ಲಾಸಿಫೈಡ್ ಅನ್ನು ಪೋಸ್ಟ್ ಮಾಡಲು ಸೂಕ್ತವಾದ ವಿಭಾಗವನ್ನು ಆಯ್ಕೆ ಮಾಡಿ ಅಥವಾ ನಿಮ್ಮ ಜಾಹೀರಾತು ಸಮುದಾಯದಿಂದ "ವಿಭಾಗಬಾಹಿರ" ವೆಂಬಂತೆ ಗುರುತಿಸಲ್ಪಡುವುದು.
ನಿಮ್ಮ ವಿಭಾಗವನ್ನು ಆಯ್ಕೆ ಮಾಡಲು ನಿಮಗೇನಾದರೂ ಸಮಸ್ಯೆಯಿದ್ದರೆ , ದಯವಿಟ್ಟು ನಮ್ಮನ್ನು ಇಲ್ಲಿ ಸಂಪರ್ಕಿಸಿರಿ: classifieds@webdunia.net
3. ನಾನು ಕ್ಲಾಸಿಫೈಡ್ ಅನ್ನು ಹೇಗೆ ಸಂಪಾದನೆ ಮಾಡಲಿ ಅಥವಾ ಅಳಿಸಲಿ?
ನಿಮ್ಮ ಕ್ಲಾಸಿಫೈಡ್ ಅನ್ನು ಸಂಪಾದಿಸಲು/ ಅಳಿಸಲು ಈ ಹಂತಗಳನ್ನು ಅನುಸರಿಸಿ:
ಹಂತ1: ನಿಮ್ಮ ಲಾಗಿನ್ ID ಮತ್ತು ಪಾಸ್‌ವರ್ಡ್ ಬಳಸಿ ವೆಬ್‌ದುನಿಯಾ ಕ್ಲಾಸಿಫೈಡ್‌ಗೆ ಲಾಗಿನ್ ಆಗಿ.
ಹಂತ2: ಜಾಹೀರಾತುಗಳನ್ನು ನಿರ್ವಹಿಸಿ ಮೇಲೆ ಕ್ಲಿಕ್ ಮಾಡಿ .
ಹಂತ3: ನೀವು ವೀಕ್ಷಿಸಲು /ಸಂಪಾದಿಸಲು/ಅಳಿಸಲು ಬಯಸುವ ಜಾಹೀರಾತನ್ನು ಆಯ್ಕೆಮಾಡಿ ಮತ್ತು ಕ್ರಿಯಾ ಕಾಲಂನಿಂದ ಕ್ರಿಯೆಯನ್ನು ಆಯ್ಕೆ ಮಾಡಿ.
ಹಂತ4: ಅಲ್ಲಿರುವ ಲಿಂಕ್‌ನ ಮೇಲೆ ಕ್ಲಿಕ್ ಮಾಡಿ, ನಿಮ್ಮ ಕ್ಲಾಸಿಫೈಡ್ಸ್ ಅನ್ನು ವೀಕ್ಷಿಸಲು, ಸಂಪಾದಿಸಲು ಅಥವಾ ಅಳಿಸಲು ಸಾಧ್ಯವಾಗುತ್ತದೆ
4. ನನ್ನ ಕ್ಲಾಸಿಫೈಡ್ ಎಲ್ಲಿಯ ವರೆಗೆ ಸಕ್ರಿಯವಾಗಿರಬಹುದು? 
ನಿಮ್ಮ ಕ್ಲಾಸಿಫೈಡ್ ದೃಢೀಕರಣದ ದಿನಾಂಕದ ನಂತರದ 365 ದಿನಗಳ ವರೆಗೆ ಸಕ್ರಿಯವಾಗಿರುವುದು. 365 ದಿನಗಳ ನಂತರ, ನಿಮ್ಮ ಕ್ಲಾಸಿಫೈಡ್ ಅನ್ನು ನವೀಕರಿಸಲು ನಿಮ್ಮ ನೋಂದಣಿ IDಗೆ ಒಂದು ಇಮೇಲ್ ಅನ್ನು ಪಡೆಯುವಿರಿ. ನಿಮ್ಮ ಕ್ಲಾಸಿಫೈಡ್ ಅನ್ನು ನವೀಕರಿಸಬೇಕಾದರೆ ನೀವು ಮೇಲ್‌ನಲ್ಲಿರುವ ಲಿಂಕ್‌ನ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ, ಇಲ್ಲವಾದರೆ ಮೇಲ್ ಅನ್ನು ತಿರಸ್ಕರಿಸಿ.
5. ನನ್ನ ಕ್ಲಾಸಿಫೈಡ್ ಅನ್ನು ಪ್ರಕಟಿಸಲು ನನಗೆ ದೃಢೀಕರಣ ಇಮೇಲ್ ದೊರೆಯದಿದ್ದರೆ ನಾನೇನು ಮಾಡಲಿ? 
ನಿಮಗೆ ದೃಢೀಕರಣ ಮೇಲ್ ಲಭಿಸದೇ ಇದ್ದರೆ, ದಯವಿಟ್ಟು ನೀವು ನೋಂದಣಿಯ ವೇಳೆಯಲ್ಲಿ ಒದಗಿಸಿದ ಮತ್ತು ನಿಮ್ಮ ಕ್ಲಾಸಿಫೈಡ್ ಸಕ್ರಿಯಗೊಳಿಸಲು ನಿಮಗೆ ದೃಢೀಕರಣ ಇಮೇಲ್ ದೊರೆತ ಇಮೇಲ್ ಇದಾಗಿದೆ ಮತ್ತು ನೀವು ಇದರಲ್ಲಿಯೇ ಲಾಗಿನ್ ಮಾಡುತ್ತಿದ್ದೀರಿ ಎಂಬುದಾಗಿ ಖಚಿತಪಡಿಸಿಕೊಳ್ಳಿ.
6. ಆಸಕ್ತಿಯಿರುವ ಕ್ಲಾಸಿಫೈಡ್ ಅನ್ನು ಹೇಗೆ ಉಳಿಸಲಿ? 
ನಿಮಗೆ ಆಸಕ್ತಿಯಿರುವ ಕ್ಲಾಸಿಫೈಡ್ ಅನ್ನು "ನೆಚ್ಚಿನವುಗಳಿಗೆ ಉಳಿಸಿ"ಎಂಬ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಸಂಗ್ರಹಿಸಬಹುದು, ಇದು ನಿಮಗೆ ಪ್ರತಿ ಕ್ಲಾಸಿಫೈಡ್‌ನ ಮೇಲ್ಭಾಗದಲ್ಲಿ ದೊರೆಯುವುದು.
ನಿಮ್ಮ ನೆಚ್ಚಿನವುಗಳ ಪಟ್ಟಿಯಲ್ಲಿ ಜಾಹೀರಾತುಗಳನ್ನು ಎಷ್ಟು ಸಂಖ್ಯೆಯಲ್ಲಿ ಬೇಕಾದರೂ ಸೇರಿಸಬಹುದು.
7. ನಾನು ನನ್ನ ಕ್ಲಾಸಿಫೈಡ್ ಜಾಹೀರಾತನ್ನು ನಾನು ಹೇಗೆ ವೀಕ್ಷಿಸಲಿ? 
ನಿಮ್ಮ ಕ್ಲಾಸಿಫೈಡ್ಸ್ ಅನ್ನು ವೀಕ್ಷಿಸಲು ಎರಡು ದಾರಿಗಳಿವೆ:
ನಿಮ್ಮ ಪೋಸ್ಟಿಂಗ್ ಅನ್ನು ದೃಢೀಕರಿಸಲಾಗಿದೆ ಎಂದು ಕಳುಹಿಸಲಾದ ಇಮೇಲ್ ಅನ್ನು ಇನ್ನೊಂದು ಬಾರಿ ಕ್ಲಿಕ್ ಮಾಡಿ.
ವೆಬ್‌ದುನಿಯಾ ಕ್ಲಾಸಿಫೈಡ್ ಪೋರ್ಟಲ್‌ನಲ್ಲಿರುವ ನಿಮ್ಮ ಡ್ಯಾಶ್‌ಬೋರ್ಡ್‌ನ ಎಡಪಟ್ಟಿಯಲ್ಲಿರುವ "ನನ್ನ ಜಾಹೀರಾತುಗಳು" > "ಜಾಹೀರಾತುಗಳನ್ನು ನಿರ್ವಹಿಸಿ" ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ
ಇಲ್ಲಿ ನೀವು ನಿಮ್ಮ ಜಾಹೀರಾತುಗಳನ್ನು ವೀಕ್ಷಿಸಬಹುದು/ಸಂಪಾದಿಸಬಹುದು/ಅಳಿಸಬಹುದಾಗಿದೆ.
8. ನನ್ನ ಕ್ಲಾಸಿಫೈಡ್ ಜಾಹೀರಾತನ್ನು ಯಾಕೆ ಅಳಿಸಲಾಗಿದೆ? 
ಕ್ಲಾಸಿಫೈಡ್(ಗಳು)ನ್ನು ಈ ಕೆಳಗಿನ ಕೆಲವೊಂದು ಕಾರಣಗಳಿಂದಾಗಿ ಅಳಿಸಿರಬಹುದು:
• ಪ್ರಕಟಣೆಯ ಅವಧಿಯಾದ 365 ದಿನಗಳು ಮೀರಿರಬಹುದು.
• ದುರ್ಬಳಕೆ ಎಂಬ ನೆಪದಲ್ಲಿ ಕಮ್ಯೂನಿಟಿಯು ಕ್ಲಾಸಿಫೈಡ್‌ಅನ್ನು ತೆಗೆದು ಹಾಕಿರಬಹುದು.
9. ನಾನು ಕ್ಲಾಸಿಫೈಡ್ ಜಾಹೀರಾತಿಗೆ ಹೇಗೆ ಪ್ರತ್ಯುತ್ತರ ಕಳುಹಿಸಲಿ? 
ಪ್ರತಿ ಕ್ಲಾಸಿಫೈಡ್‌ಜಾಹೀರಾತಿನ ಬಲಭಾಗವು ಜಾಹೀರಾತುದಾರರ ಸಂಪರ್ಕ ಕ್ಷೇತ್ರವಾಗಿದೆ. ನೀವು ನಿಮ್ಮ ಹೆಸರು, ಇಮೇಲ್ id, ಸಂಪರ್ಕ ಸಂಖ್ಯೆ ಮತ್ತು ಸಂದೇಶವನ್ನು ನಮೂದಿಸಿ ಮತ್ತು ಜಾಹಿರಾತು ಮಾಲೀಕರಿಗೆ ಕಳುಹಿಸಿ. ನೀವು ಬರೆಯುತ್ತಿರುವ ವ್ಯಕ್ತಿಗೆ ನೀವು ಒದಗಿಸಿದ ವಿವರಗಳನ್ನು ಕಾಣಲು ಸಾಧ್ಯವಾಗುವುದು.
10. ವೆಬ್‌ದುನಿಯಾ ಕ್ಲಾಸಿಫೈಡ್ಸ್‌ನಲ್ಲಿ ನಾನು ಕ್ಲಾಸಿಫೈಡ್ಸ್ ಅನ್ನು ಹೇಗೆ ಶೋಧಿಸಲಿ? 
ನಿಮ್ಮ ಆಯ್ಕೆಯ ಕ್ಷೇತ್ರವನ್ನು ಆರಿಸಿ ನಿಮ್ಮ ಆಯ್ಕೆಯ ವಿಭಾಗದಲ್ಲಿ ಕ್ಲಾಸಿಫೈಡ್ಸ್‌ನ್ನು ಶೋಧಿಸಬೇಕು. ವಿಭಾಗದಿಂದ ವಿಭಾಗಕ್ಕೆ ಶೋಧ ಕ್ಷೇತ್ರಗಳು ವಿಭಿನ್ನವಾಗಿರುತ್ತವೆ. ವೆಬ್‌ದುನಿಯಾ ಕ್ಲಾಸಿಫೈಡ್ ಪೋರ್ಟಲ್‌ನಲ್ಲಿ ನಿಮ್ಮ IDಯನ್ನು ನೋಂದಣಿ ಮಾಡುವುದಕ್ಕಿಂತ ಮೊದಲು ಮತ್ತು ನಂತರ ಜಾಹೀರಾತುಗಳನ್ನು ಶೋಧಿಸಬಹುದು ವಿಭಿನ್ನ ಕ್ಷೇತ್ರಗಳಲ್ಲಿ ಆಯ್ಕೆಗಳನ್ನು ಆರಿಸುವುದ ಮೂಲಕ ನಿಮ್ಮ ಅವಶ್ಯಕತೆಯ ಶೋಧವನ್ನು ಫಿಲ್ಟರ್ ಮಾಡಬಹುದು ಮತ್ತು ಶೋಧ ಕ್ಲಿಕ್ ಮಾಡಿ.
11. ಹೊಸ ಪೋಸ್ಟಿಂಗ್ ಮಾಡಿದಾಗ ನಾನು ಹೇಗೆ ಇಮೇಲ್ ಎಚ್ಚರಿಕೆಯೊಂದನ್ನು ಸ್ವೀಕರಿಸಲಿ? 
ನೀವು ಒಂದು ಬಾರಿ ವೆಬ್‌ದುನಿಯಾ ಕ್ಲಾಸಿಫೈಡ್‌ನಲ್ಲಿ ನೋಂದಣಿ ಮಾಡಿದ್ದರೆ ನಿಮ್ಮ ಡ್ಯಾಶ್‌ಬೋರ್ಡ್‌ನ ಎಡಫಲಕದಲ್ಲಿರುವ "ನನ್ನ ಎಚ್ಚರಿಕೆಗಳು" > "ಹೊಸ ಎಚ್ಚರಿಕೆಯನ್ನು ಹೊಂದಿಸಿ" ಇದರಿಂದ ಎಚ್ಚರಿಕೆಗಳನ್ನು ಸೆಟ್ ಮಾಡಬಹುದು. ಆಯ್ಕೆಯಾದ/ ಐಚ್ಛಿಕ ಕ್ಷೇತ್ರಗಳಿಂದ ಕ್ಲಾಸಿಫೈಡ್ಸ್‌ಅನ್ನು ಶೋಧಿಸುತ್ತದೆ ಮತ್ತು ಈ ಶೋಧ ಮಾನದಂಡವನ್ನು "ಎಚ್ಚರಿಕೆ ನಿರ್ವಹಣೆ" ಆಯ್ಕೆಯಲ್ಲಿ ಉಳಿಸುತ್ತದೆ.("ಹೊಸ ಎಚ್ಚರಿಕೆ ಕ್ಷೇತ್ರವನ್ನು ಹೊಂದಿಸಿ"ಯ ಕೆಳಗೆ ಇದು ಲಭ್ಯ), ಇಲ್ಲಿ ನೀವು ಎಚ್ಚರಿಕೆಗಳನ್ನು ಸಂಪಾದಿಸಬಹುದು/ ಅಳಿಸಬಹುದು. ಹೊಂದಿಕೆಯಾಗುವ ಹೊಸತೊಂದು ಕ್ಲಾಸಿಫೈಡ್‌ಪೋಸ್ಟ್ ಮಾಡಿದಾಗ ನೀವು ಇಮೇಲ್ ದೃಢೀಕರಣವೊಂದನ್ನು ಪಡೆಯುವಿರಿ.
12. ನನ್ನ ಕ್ಲಾಸಿಫೈಡ್ ಜಾಹೀರಾತಿನೊಂದಿಗೆ ಫೋಟೋವನ್ನು ಹೇಗೆ ಪೋಸ್ಟ್ ಮಾಡಬಹುದು/ನವೀಕರಿಸಬಹುದು/ಸೇರಿಸಬಹುದು?
• ವೆಬ್‌ದುನಿಯಾ ಕ್ಲಾಸಿಫೈಡ್ ಪೋರ್ಟಲ್‌ಗೆ ನಿಮ್ಮ "ಇಮೇಲ್ id" ಮತ್ತು "ಪಾಸ್‌ವರ್ಡ್" ನಿಂದ ಲಾಗಿನ್ ಆಗಿ
• "ನನ್ನ ಜಾಹೀರಾತುಗಳು"> "ಜಾಹೀರಾತುಗಳನ್ನು ನಿರ್ವಹಿಸಿ" ಕ್ಲಿಕ್ ಮಾಡಿ.
• "ಸಂಪಾದಿಸು" ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು "ಇಮೇಜ್ ಅಪ್‌ಲೋಡ್ ಮಾಡಿ" ಆಯ್ಕೆಯನ್ನು ಬಳಸಿ ಇಮೇಜ್‌ನ್ನು ಅಪ್‌ಲೋಡ್ ಮಾಡಿ.
ಪೋರ್ಟಲ್‌ನಲ್ಲಿ ಪ್ರದರ್ಶಿತವಾಗುವುದಕ್ಕಿಂತ ಮೊದಲು ನೀವು ಅಪ್‌ಲೋಡ್ ಮಾಡಿದ ಇಮೇಜ್ ವೆಬ್‌ದುನಿಯಾ ಕ್ಲಾಸಿಫೈಡ್ ನಿರ್ವಹಣಾಧಿಕಾರಿಯಿಂದ ದೃಢೀಕರಿಸಲ್ಪಡುವುದು.
13. ನನ್ನ ಜಾಹೀರಾತುಗಳು ಒಂದೇ ಬಾರಿಗೆ ಪೋಸ್ಟ್ ಮಾಡಲಾಗುವುದೇ?
ಹೌದು, ಪೋರ್ಟಲ್‌ನಲ್ಲಿ ಪೋಸ್ಟ್ ಮಾಡಿದ/ರಚಿಸಿದ ಪ್ರತಿಯೊಂದು ಜಾಹೀರಾತನ್ನು ಪೋರ್ಟಲ್‌ನಲ್ಲಿ ತತ್‌ಕ್ಷಣದಲ್ಲಿ ನೋಡಬಹುದು. ಆದರೆ ಇಮೇಜ್ (ಇದ್ದರೆ) ಜಾಹೀರಾತು ಸಹಿತವಾಗಿ ವೆಬ್‌ದುನಿಯಾ ಕ್ಲಾಸಿಫೈಡ್‌ನಿರ್ವಾಹಕರಿಂದ ದೃಢೀಕರಣ/ಪ್ರಮಾಣೀಕರಿಸಬೇಕಾಗುತ್ತದೆ.
14. ನನ್ನ ಶೋಧ ಮಾನದಂಡವನ್ನು ಹೊಂದುವಂತಹ ಜಾಹೀರಾತುಗಳ ಬಗ್ಗೆ ನನಗೆ ಸೂಚನೆ ಸಿಗುವುದೇ?
ಹೌದು. ಎಚ್ಚರಿಕೆಯೊಂದನ್ನು ಹೊಂದಿಸಿದ್ದರೆ, ನಿಮ್ಮ ಶೋಧ ವಿಭಾಗವನ್ನು ಹೋಲುವಂತಹ ಜಾಹೀರಾತಿನ ಪಟ್ಟಿಗಳು ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ.
15. ನನ್ನ ಪಾಸ್‌ವರ್ಡ್‌ನ್ನು ನಾನು ಮರೆತಿದ್ದೇನೆ ಅಥವಾ ನನ್ನ ಪಾಸ್‌ವರ್ಡ್‌ನ್ನು ರೀಸೆಟ್ ಮಾಡಬಯಸುತ್ತೇನೆ. ನಾನು ಏನು ಮಾಡಬೇಕು?
• ವೆಬ್‌ದುನಿಯಾ ಕ್ಲಾಸಿಫೈಡ್ಸ್‌ಗೆ ಭೇಟಿ ನೀಡಿ
• ಲಾಗಿನ್ ಲಿಂಕ್‌ನ್ನು ಕ್ಲಿಕ್ ಮಾಡಿ.
• "ಪಾಸ್‌ವರ್ಡ್ ಮರೆತಿದ್ದೀರಾ?" ಲಿಂಕ್ ಕ್ಲಿಕ್ ಮಾಡಿ
• ನಿಮ್ಮ ಇಮೇಲ್ ID ಮತ್ತು ಪ್ರಮಾಣೀಕರಣ ಕೋಡ್‌ನಮೂದಿಸಿ.
ಪಾಸ್‌ವರ್ಡ್‌ನ್ನು ಬದಲಾಯಿಸಿದನ್ನು ಖಚಿತಪಡಿಸಿ ನಿಮ್ಮ ಇಮೇಲ್ IDಗೆ ಮೇಲ್‌ವೊಂದನ್ನು ಕಳುಹಿಸಲಾಗುವುದು. ನಿಮ್ಮ ಮೇಲ್ IDಗೆ ಲಾಗಿನ್ ಮಾಡಿ ಮತ್ತು ನಿಮ್ಮ ಪಾಸ್‌ವರ್ಡ್‌ನ್ನು ಹಿಂಪಡೆಯಲು/ರೀಸೆಟ್ ಮಾಡಲು ನಿಮ್ಮ ಖಾತೆಯಿಂದ ಖಚಿತಪಡಿಸುವ ಸೂಚನೆ ಕಳುಹಿಸಿ. ನಿಮ್ಮ ಪಾಸ್‌ವರ್ಡ್‌ನ್ನು ನಿಮ್ಮ ಮೇಲ್ IDಗೆ ಮೇಲ್ ಮಾಡಲಾಗುವುದು.
16. ಯಾಕೆ ನನ್ನ ಜಾಹೀರಾತಿಗೆ ಯಾವುದೇ ಪ್ರತಿಕ್ರಿಯೆ ಲಭಿಸುತ್ತಿಲ್ಲ?
ಜಾಹೀರಾತಿಗೆ ಪ್ರತಿಕ್ರಿಯೆ ಪಡೆಯದೇ ಇರುವುದಕ್ಕೆ ಸಾಮಾನ್ಯವಾದ ಕಾರಣವೆಂದರೆ ತಪ್ಪಾದ ಸಂಪರ್ಕ ವಿವರಗಳು/ ಮಾಹಿತಿಗಳನ್ನು ನೀಡಿರುವುದು. ನೀವು ನೀಡಿರುವ ಇಮೇಲ್ ವಿಳಾಸ/ಮೊಬೈಲ್ ಸಂಖ್ಯೆಯೊಡನೆ ನನ್ನ ಪ್ರೊಫೈಲ್ ವಿಭಾಗದಲ್ಲಿ ನಿಮ್ಮ ಸಂಪರ್ಕ ಸಂಖ್ಯೆಯನ್ನು ಪರಿಶೀಲಿಸಲು ನಾವು ಸಲಹೆ ನೀಡುತ್ತೇವೆ. ಹಾಗೆಯೇ ನೀವು ಸರಿಯಾದ ವಿಭಾಗದಲ್ಲಿಯೇ ಜಾಹೀರಾತನ್ನು ಪೋಸ್ಟ್ ಮಾಡಿದ್ದೀರಾ ಎಂಬುದನ್ನೂ ಖಚಿತಪಡಿಸಿಕೊಳ್ಳಿ.
17. ನನ್ನ ನಗರದ ಹೆಸರು ವೆಬ್‌ದುನಿಯಾ ಕ್ಲಾಸಿಫೈಡ್‌ನಲ್ಲಿ ಕಾಣಿಸಿಕೊಳ್ಳದಿದ್ದರೆ ಏನು ಮಾಡಬೇಕು?
ದಯವಿಟ್ಟು ಹೊಸ ನಗರಗಳು ಅಥವಾ ಹೊಸ ಪ್ರದೇಶಗಳನ್ನು classifieds@webdunia.net ಗೆ ಮೇಲ್ ಮಾಡುವುದರ ಮೂಲಕ ಸೂಚಿಸಿ.ನೀವು ಪ್ರದೇಶದ ಬಗ್ಗೆ ಸಲಹೆ ನೀಡುವಾಗ ನಾವು ಅದನ್ನು ಅತೀ ಶೀಘ್ರವಾಗಿ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಲ್ಯಾಂಡ್‌ಮಾರ್ಕ್‌ನ್ನು ದಯವಿಟ್ಟು ಸೂಚಿಸಿ. .
ಸಾಮಾನ್ಯ
1. ವೆಬ್‌ದುನಿಯಾ ಕ್ಲಾಸಿಫೈಡ್‌ನಲ್ಲಿ ಎಲ್ಲಿ ನಾನು ನೋಂದಣಿ ಮಾಡಿಕೊಳ್ಳಬೇಕು? 
ವೆಬ್‌ದುನಿಯಾ ಕ್ಲಾಸಿಫೈಡ್‌ನಲ್ಲಿ ನೋಂದಣಿ ಮಾಡಲು ನೀವು ಇಮೇಲ್ IDಯನ್ನು ಹೊಂದಿರಲೇಬೇಕು. (ಪೋರ್ಟಲ್‌ನಲ್ಲಿನ ಸ್ಥಳವನ್ನು ನಿರ್ದಿಷ್ಟ ಪಡಿಸಬೇಕು).
ಆದಾಗ್ಯೂ, ನಿಮ್ಮ ಅಥವಾ ಇತರ ಕ್ಲಾಸಿಫೈಡ್‌ಗಳನ್ನು ನೋಂದಣಿ ಮಾಡಿಕೊಳ್ಳದೇ ಶೋಧಿಸಬಹುದು. ಆದರೆ ನಿಮ್ಮ ಜಾಹೀರಾತು ಪೋಸ್ಟ್ ಮಾಡಿಗೆ ನೀವು ನೋಂದಣಿ ಮಾಡಬೇಕಾಗುತ್ತದೆ. "ಸೈನ್ ಇನ್" ಕ್ಲಿಕ್ ಮಾಡಿ ಮತ್ತು ಅಲ್ಲಿರುವ ಸೂಚನೆಗಳನ್ನು ಅನುಸರಿಸಿರಿ.
ಒಂದು ವೇಳೆ ಇಮೇಲ್ IDಯನ್ನು ನೀವು ಹೊಂದಿಲ್ಲದಿದ್ದರೆ ನೀವು ವೆಬ್‌ದುನಿಯಾ ಕ್ಲಾಸಿಫೈಡ್ ಪುಟದ ಮೇಲ್ಭಾಗದಲ್ಲಿರುವ 'ಸೈನ್ ಅಪ್' ಲಿಂಕ್ ಬಳಸಿಕೊಂಡು ರಚಿಸಿ ಮತ್ತು' ವೆಬ್‌ದುನಿಯಾ ಮೇಲ್‌ಗೆ ಸೈನ್ ಅಪ್ ಮಾಡಿ' ಕ್ಲಿಕ್ ಮಾಡಿ.
2. ನಾನು ನನ್ನ ಇಂಟರ್‌ಫೇಸ್ ಭಾಷೆಯನ್ನು ಹೇಗೆ ಬದಲಿಸಲಿ?
ನಿಮ್ಮ ಪುಟದ ಇಂಟರ್‌ಫೇಸ್ ಭಾಷೆಯನ್ನು ಬದಲಾಯಿಸಲು, ವೆಬ್‌ದುನಿಯಾ ಕ್ಲಾಸಿಫೈಡ್‌ನ ಮುಖಪುಟದ ಮೇಲ್ಭಾಗದ ಬಲ ತುದಿಯಲ್ಲಿರುವ ಅಪೇಕ್ಷಿತ ಭಾಷೆಯ ಟ್ಯಾಬ್‌ನ್ನು ಕ್ಲಿಕ್ ಮಾಡಿ
3. ವೆಬ್‌ದುನಿಯಾ ಕ್ಲಾಸಿಫೈಡ್‌ನ ನಿಬಂಧನೆ ಮತ್ತು ಷರತ್ತುಗಳಾವುವು? 
4. ದುರ್ಬಳಕೆ, ಸ್ಪಾಮ್ ಅಥವಾ ಅಶ್ಲೀಲ ವಿಷಯಗಳನ್ನು ಹೇಗೆ ವರದಿ ಮಾಡಲಿ? 
ದುರ್ಬಳಕೆ, ಸ್ಪಾಮ್ ಮತ್ತು ಅಶ್ಲೀಲ ವಿಷಯಗಳನ್ನು ವರದಿ ಮಾಡಲು ಜಾಹೀರಾತು ಮತ್ತು ನಿಮಗೆ ಸ್ವೀಕರಿಸಲಾಗದಂತಹ ವಿಷಯಗಳನ್ನು ವಿವರಿಸಿ ನಮ್ಮ ಅಧಿಕೃತ ಮೇಲ್ IDಯಾದ classifieds@webdunia.netಗೆ ಮೇಲ್ ಕಳುಹಿಸಿ.
ಜಾಹೀರಾತನ್ನು ವೀಕ್ಷಣೆ ಮಾಡುವ ಸಂದರ್ಭದಲ್ಲಿ, ನೀವು ಜಾಹೀರಾತಿನಲ್ಲಿರುವ ಯಾವುದೇ ಯೋಗ್ಯವಲ್ಲದ ಡೇಟಾವನ್ನು ಜಾಹೀರಾತಿನ ಪ್ರದೇಶದ ಮೇಲಿರುವ ದುರ್ಬಳಕೆ ವರದಿ ಟ್ಯಾಬ್ ಕ್ಲಿಕ್ ಮಾಡುವುದರ ಮೂಲಕ ವರದಿ ಮಾಡಬಹುದು ದುರ್ಬಳಕೆಯನ್ನು ವರದಿ ಮಾಡಲು ನೀವು ನಮ್ಮೊಂದಿಗೆ ಲಾಗಿನ್ IDಯನ್ನು ಹೊಂದಿರಬೇಕಾಗುತ್ತದೆ. ಜಾಹೀರಾತಿನ ವರದಿಯ ಕಾರಣವನ್ನು ಅನಪೇಕ್ಷಿತ ಎಂದು ಆಯ್ಕೆ ಮಾಡಿ, ನಿಮ್ಮ ಪ್ರಮಾಣೀಕರಣ ಕೋಡ್ ಬೆರಳಚ್ಚಿಸಿ ಮತ್ತು ನಿಮ್ಮ ಕೋರಿಕೆಯನ್ನು ಸಲ್ಲಿಸಿ. ನಿಮ್ಮ ಕೋರಿಕೆಯನ್ನು ನಿರ್ವಹಣಾಧಿಕಾರಿಗೆ ಸಲ್ಲಿಸಲಾಗುವುದು, ಅವರು ಕೋರಿಕೆಯನ್ನು ಸ್ವೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ
5. ಪೋಸ್ಟ್ ಮಾಡುವುದರ ಮೂಲಕ ಯಾರಾದರೂ ನನಗೆ ಕಿರುಕುಳ ನೀಡಿದರೆ ನಾನೇನು ಮಾಡಲಿ?
ಒಮ್ಮೆ ಯಾರಾದರೂ ಕ್ಲಾಸಿಫೈಡ್/ಕಾಮೆಂಟ್ ಪೋಸ್ಟ್ ಮಾಡುವುದರ ಮೂಲಕ ಕಿರುಕುಳ ನೀಡಿದರೆ, ಮತ್ತು ಹೇಗೆ ಮತ್ತು ಏಕೆ ಕಿರುಕುಳ ನೀಡಲಾಗುತ್ತಿದೆ ಎಂಬ ವಿವರಗಳೊಡನೆ classifieds@webdunia.netನ್ನು ಸಂಪರ್ಕಿಸಿ.
ಗಮನಿಸಿ: ಜಾಹೀರಾತನ್ನು ಕಂಡುಹಿಡಿದು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಲು ಸಹಾಯವಾಗುವಂತೆ, ದಯವಿಟ್ಟು ನಗರ, ವಿಭಾಗ ಮತ್ತು ಪೋಸ್ಟಿಂಗ್‌ನ ಶೀರ್ಷಿಕೆಯನ್ನು ನಮೂದಿಸಿ.